ಧೀರ್ಘಕಾಲಿನ ಚರ್ಮ ರೋಗಗಳೊಂದಿಗೆ
ಉತ್ಸಾಹದಿಂದ ಜೀವಿಸಲು 7 ಸಲಹೆಗಳು

ಈ ಜೀವನದಲ್ಲಿ ಲವಲವಿಕೆಯಿಂದ ಬದುಕಲು ಜೀವನ ಮತ್ತು ಉತ್ತಮ ಜೀವನಶೈಲಿ ಬಹಳ ಮುಖ್ಯ. ಜೀವನವು ಯಾವಾಗಲೂ ಒಳ್ಳೆಯದು ಮತ್ತು ಕೆಟ್ಟದ್ದು, ಏರಿಳಿತಗಳು, ಆರೋಗ್ಯ ಮತ್ತು ಅನಾರೋಗ್ಯ ಇತ್ಯಾದಿಗಳ ಮಿಶ್ರಣವಾಗಿದೆ; ಆದರೆ ಇವೆಲ್ಲವೂ ನಿಮಗೆ ಧೀರ್ಘಕಾಲಿನ ಚರ್ಮ ರೋಗಗಳು ಇದ್ದರೂ ಸಹ, ಒಳ್ಳೆಯ ಜೀವನವನ್ನು ನಡೆಸುವುದನ್ನು ತಡೆಯಬಾರದು ಮತ್ತು ತಡೆಯುವುದಿಲ್ಲ.

ಸಂತೋಷದ ಜೀವನವನ್ನು ಜೀವಂತಿಕೆಯಿಂದ ಜೀವಿಸಲು ಇಲ್ಲಿ ಕೆಲವು ಸಲಹೆಗಳಿವೆ.

1. ಜೀವನದಲ್ಲಿ ಒಂದು ದೊಡ್ಡ ದ್ಯೇಯ, ಉದ್ದೇಶ ಮತ್ತು ಗುರಿಯನ್ನು ಹೊಂದಿರಿ

ನಿಮ್ಮ ಜೀವನದಲ್ಲಿ ಒಂದು ದೊಡ್ಡ ದ್ಯೇಯ, ಉದ್ದೇಶ ಮತ್ತು ಗುರಿಯನ್ನು ಹೊಂದಿರಿ. ಇವುಗಳು ನಿಮ್ಮ ಜೀವನದಲ್ಲಿ ಎಂತಹ ಸ್ಥಿತಿಯಲ್ಲಿದ್ದರೂ, ನಿಮ್ಮನ್ನು ಮುಂದಕ್ಕೆ ಎಳೆಯುತ್ತವೆ. ಯಾವುದರಲ್ಲಿ ನಿಮಗೆ ಉತ್ಸಾಹವಿದೆ ಕಂಡುಕೊಳ್ಳಿ. ಯಾವ ಕೆಲಸವನ್ನು ಮಾಡಿದರೆ ನೀವು ಸಮಯವನ್ನು ಪರಿಗಣಿಸದೆ, ಲಾಭವನ್ನು ಪರಿಗಣಿಸದೆ ನೀವು ಸಂತೋಷದಿಂದ, ಉತ್ಸಾಹದಿಂದ ಕೆಲಸ ಮಾಡಲು ಸಿದ್ಧರಾಗಿರುವಿರಿ ಎನ್ನುವುದನ್ನು ಕಂಡುಕೊಳ್ಳಿ. ಯಾವುದರಲ್ಲಿ ನೀವು ಕುಶಲತೆಯನ್ನು ಹೊಂದಿದ್ದೀರಿ ಎಂಬುವುದನ್ನು ತಿಳಿಯಿರಿ. ನೀವು ಉತ್ಸಾಹದಿಂದ ಮತ್ತು ಕುಶಲತೆಯಿಂದ, ಸಮಾಜದಲ್ಲಿನ ಯಾವ ಸಮಸ್ಯೆಗಳನ್ನು ಪರಿಹರಿಸಬಲ್ಲಿರಿ ಎಂಬುವುದನ್ನು ತಿಳಿಯಿರಿ. ಈ ಸಮಸ್ಯೆಗಳನ್ನು ಪರಿಹರಿಸಿದ ನಂತರ ಯಾವ ಫಲಿತಾಂಶ ಜನರಿಗೆ ದೊರೆಯುತ್ತದೋ, ಅದೇ ನಿಮ್ಮ ಜೀವನದ ಗುರಿಯಾಗಿರಲಿ. ಜನಸಾಮಾನ್ಯರ ಸಮಸ್ಯೆಯನ್ನು ಪರಿಹರಿಸಲು ನೀವು ತೆಗೆದುಕೊಳ್ಳುವ ಮಾರ್ಗವು ನಿಮ್ಮ ಧ್ಯೇಯವಾಗಿರುತ್ತದೆ.

ನಿಮ್ಮನ್ನು ನೀವು ಕೀಳರಿಮೆಯಿಂದ ನೋಡಬೇಡಿ. ನಿಮಗಿಂತ ದೊಡ್ಡದಾದ ಜೀವನೋದ್ದೇಶದಿಂದ,
ಜೀವನಧ್ಯೇಯದಿಂದ, ಜೀವನಗುರಿಯಿಂದ ಕೆಲಸ ಮಾಡಲು ಪ್ರಾರಂಭಿಸಿ. ಅದು ನಿಮ್ಮನ್ನು ಮತ್ತು ನಿಮ್ಮ ಜೀವನವನ್ನು ಯೋಗ್ಯ ಮತ್ತು ಉತ್ಸಾಹಭರಿತವಾಗಿಸಲು ನಿಮಗೆ ಸಾಕಷ್ಟು ಶಕ್ತಿಯನ್ನು ತುಂಬುತ್ತದೆ.

2. ನಿಯಮಿತವಾಗಿ ವ್ಯಾಯಾಮ ಮಾಡಿ

ವ್ಯಾಯಾಮವು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿರಿಸುತ್ತದೆ. ಇದು ಧೀರ್ಘಕಾಲಿನ ಚರ್ಮ ರೋಗಗಳಲ್ಲಿ ಕಾಣುವ ಉರಿಯೂತದ ಪರಿಣಾಮವನ್ನು ಕಡಿಮೆಗೊಳಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ. ಇದು ನಿಮ್ಮ ಎಲ್ಲ ಧೀರ್ಘಕಾಲಿನ ಚರ್ಮ ರೋಗಗಳಿಗೂ ಒಳ್ಳೆಯದು. ಇದು ಬಲವಾದ ಹೃದಯ ಬಡಿತದೊಂದಿಗೆ ರಕ್ತವನ್ನು ಪಂಪ್ ಮಾಡಲು ಸಹಾಯ ಮಾಡುತ್ತದೆ. ಇದು ಬೆವರುವಿಕೆಯನ್ನು ಹೆಚ್ಚಿಸುತ್ತದೆ, ಇದು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸುತ್ತದೆ.

ನೀವು ಇದುವರೆವಿಗೂ ನಿಯಮಿತವಾಗಿ ವ್ಯಾಯಾಮವನ್ನು ಮಾಡದೇ ಇದ್ದರೆ, ಈಗ ನಿಧಾನವಾಗಿ ಪ್ರಾರಂಭಿಸಿ. ಕಡಿಮೆ ಸಂಖ್ಯೆಗಳು ಮತ್ತು ಸಮಯದ ಅವಧಿಯೊಂದಿಗೆ ವ್ಯಾಯಾಮವನ್ನು ಪ್ರಾರಂಭಿಸಿ. ಸಮಯ ಮತ್ತು ಎಣಿಕೆಯನ್ನು ನಿಧಾನವಾಗಿ ಹೆಚ್ಚಿಸಿ. ಆದರೆ ಬಿಡದಂತೆ ಪ್ರತಿ ದಿನ ವ್ಯಾಯಾಮ ಮಾಡಿ.

ನೀವು ಧೀರ್ಘಕಾಲಿನ ಚರ್ಮ ರೋಗಗಳ ಜೊತೆಗೆ ಯಾವುದೇ ಇತರ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಿರಿ.

3. ನಿಮ್ಮ ದೇಹದಲ್ಲಿ ಪ್ರಾಣವಾಯುವನ್ನು ಹೆಚ್ಚಿಸಿ

ಆಳವಾದ ಉಸಿರಾಟವನ್ನು ಉತ್ತೇಜಿಸುವ ವ್ಯಾಯಾಮ ಮಾಡಿ. ಶ್ವಾಸಕೋಶಗಳ ಸಾಮರ್ಥ್ಯವೆನ್ನು ಹೆಚ್ಚಿಸಿಕೊಳ್ಳಿ. ಆಳವಾದ ಉಸಿರಾಟವು ಆಮ್ಲಜನಕದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಮಟ್ಟದ ಆಮ್ಲಜನಕವು ಉರಿಯೂತದ ಪರಿಣಾಮಗಳ ಮತ್ತು ರೋಗನಿರೋಧಕ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಹೊಂದಿದೆ. ಈ ಪ್ರಾಣವಾಯುವೇ ನಿಮ್ಮ ಜೀವವಾಯು. ಇದನ್ನು ವೃದ್ಧಿಗೊಳಿಸಿಕೊಳ್ಳಿ.

ಅಷ್ಟಾಂಗ ಯೋಗದ ಒಂದು ಭಾಗ ಪ್ರಾಣಾಯಾಮ. ಪ್ರಾಣಾಯಾಮವನ್ನು ಕಲಿಯಿರಿ ಮತ್ತು ನಿಯಮಿತವಾಗಿ ಅಭ್ಯಾಸ ಮಾಡಿ. ಪ್ರತಿದಿನ ಅಭ್ಯಾಸ ಮಾಡಿ.

4. ದೇಹದ ನೀರಿನಾಂಶವನ್ನು ಕಾಯ್ದಿರಿಸಿ

ನಮ್ಮ ದೇಹದಲ್ಲಿ ಶೇಕಡಾ ೬೦-೭೦ ಭಾಗ ನೀರಿನಿಂದ ತುಂಬಿದೆ. ನಮ್ಮ ಎಲ್ಲ ಧೈಹಿಕ ಕ್ರಿಯೆಗಳಿಗೂ ನೀರು ಅವಶ್ಯಕವಾಗಿದೆ. ದೇಹದ ತ್ಯಾಜ್ಯ ವಸ್ತುಗಳನ್ನು ಆಚೆ ಹಾಕಲೂ ನೀರು ಬೇಕು. ಆದುದರಿಂದ ದೇಹದ ನೀರಿನಾಂಶವನ್ನು ಕಾಯ್ದುಕೊಳ್ಳುವುದು ಬಹು ಮುಖ್ಯವಾಗಿದೆ.

ಪ್ರತಿದಿನ ನಿಮಗೆ ನಿಮ್ಮ ತೂಕದ (ಕಿ.ಗ್ರಾಂ.ಗಳಲ್ಲಿ) ಶೇಕಡಾ 5 ರಷ್ಟು ನೀರು (ಲೀಟರುಗಳಲ್ಲಿ) ಅವಶ್ಯಕವಾಗಿರುತ್ತದೆ.
ಇದಕ್ಕೂ ಮುಖ್ಯವಾಗಿ, ಒಂದೂವರೆಯಿಂದ ಎರಡು ಲೀಟರ್ ಮೂತ್ರವನ್ನು ಉತ್ಪಾದಿಸುವಷ್ಟು ನೀರನ್ನು ಕುಡಿಯಿರಿ. ಮೂತ್ರದ ಮೂಲಕ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ಈ ಪ್ರಮಾಣದ ಮೂತ್ರವು ಅವಶ್ಯಕವಾಗಿದೆ. ಅದೇ ಪ್ರಮಾಣದ ಮೂತ್ರವನ್ನು ಉತ್ಪಾದಿಸಲು ಬೇಸಿಗೆಯಲ್ಲಿ ನಿಮಗೆ ಹೆಚ್ಚು ನೀರು ಮತ್ತು ಚಳಿಗಾಲದಲ್ಲಿ ಕಡಿಮೆ ನೀರು ಬೇಕಾಗುತ್ತದೆ. ನಿಮ್ಮ ಮೂತ್ರ ಹಳದಿಯಾಗಿದ್ದರೆ ನೀವು ಕುಡಿಯುವ ನೀರು ಕಡಿಮೆ ಎಂದು ಅರ್ಥ.

ನಿಮಗೆ ಬಾಯಾರಿಕೆಯಾಗುವವರೆಗೆ ಕಾಯಬೇಡಿ. ದೇಹದಲ್ಲಿನ ನೀರಿನ ಮಟ್ಟವು ಅವಶ್ಯಕತೆಗಿಂತ ಕಡಿಮೆಯಾದ ನಂತರವೇ ಬಾಯಾರಿಕೆಯಾಗುತ್ತದೆ. ಆದ್ದರಿಂದ, ನೀವು ಬಾಯಾರಿಕೆಯನ್ನು ಅನುಭವಿಸಿದರೆ ನಿಮ್ಮಲ್ಲಿ ಈಗಾಗಲೇ ನೀರಿನಾಂಶ ಕಡಿಮೆಯಾಗಿದೆ ಎಂದು ಅರ್ಥ.

5. ಸಾಕಷ್ಟು ಪೌಷ್ಟಿಕಾಂಶವನ್ನು ಸೇವಿಸಿ

ನಮ್ಮ ದೇಹದಲ್ಲಿ ಶೇಕಡಾ ೬೦-೭೦ ಭಾಗ ನೀರಿನಿಂದ ತುಂಬಿದೆ. ನಮ್ಮ ಎಲ್ಲ ಧೈಹಿಕ ಕ್ರಿಯೆಗಳಿಗೂ ನೀರು ಅವಶ್ಯಕವಾಗಿದೆ. ದೇಹದ ತ್ಯಾಜ್ಯ ವಸ್ತುಗಳನ್ನು ಆಚೆ ಹಾಕಲೂ ನೀರು ಬೇಕು. ಆದುದರಿಂದ ದೇಹದ ನೀರಿನಾಂಶವನ್ನು ಕಾಯ್ದುಕೊಳ್ಳುವುದು ಬಹು ಮುಖ್ಯವಾಗಿದೆ.

ಪ್ರತಿದಿನ ನಿಮಗೆ ನಿಮ್ಮ ತೂಕದ (ಕಿ.ಗ್ರಾಂ.ಗಳಲ್ಲಿ) ಶೇಕಡಾ 5 ರಷ್ಟು ನೀರು (ಲೀಟರುಗಳಲ್ಲಿ) ಅವಶ್ಯಕವಾಗಿರುತ್ತದೆ.
ಇದಕ್ಕೂ ಮುಖ್ಯವಾಗಿ, ಒಂದೂವರೆಯಿಂದ ಎರಡು ಲೀಟರ್ ಮೂತ್ರವನ್ನು ಉತ್ಪಾದಿಸುವಷ್ಟು ನೀರನ್ನು ಕುಡಿಯಿರಿ. ಮೂತ್ರದ ಮೂಲಕ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ಈ ಪ್ರಮಾಣದ ಮೂತ್ರವು ಅವಶ್ಯಕವಾಗಿದೆ. ಅದೇ ಪ್ರಮಾಣದ ಮೂತ್ರವನ್ನು ಉತ್ಪಾದಿಸಲು ಬೇಸಿಗೆಯಲ್ಲಿ ನಿಮಗೆ ಹೆಚ್ಚು ನೀರು ಮತ್ತು ಚಳಿಗಾಲದಲ್ಲಿ ಕಡಿಮೆ ನೀರು ಬೇಕಾಗುತ್ತದೆ. ನಿಮ್ಮ ಮೂತ್ರ ಹಳದಿಯಾಗಿದ್ದರೆ ನೀವು ಕುಡಿಯುವ ನೀರು ಕಡಿಮೆ ಎಂದು ಅರ್ಥ.

ನಿಮಗೆ ಬಾಯಾರಿಕೆಯಾಗುವವರೆಗೆ ಕಾಯಬೇಡಿ. ದೇಹದಲ್ಲಿನ ನೀರಿನ ಮಟ್ಟವು ಅವಶ್ಯಕತೆಗಿಂತ ಕಡಿಮೆಯಾದ ನಂತರವೇ ಬಾಯಾರಿಕೆಯಾಗುತ್ತದೆ. ಆದ್ದರಿಂದ, ನೀವು ಬಾಯಾರಿಕೆಯನ್ನು ಅನುಭವಿಸಿದರೆ ನಿಮ್ಮಲ್ಲಿ ಈಗಾಗಲೇ ನೀರಿನಾಂಶ ಕಡಿಮೆಯಾಗಿದೆ ಎಂದು ಅರ್ಥ.

6. ವಿಶ್ರಾಂತಿ ಮಾಡಿ ಮತ್ತು ಚೆನ್ನಾಗಿ ನಿದ್ದೆ ಮಾಡಿ

ಸಕ್ರಿಯವಾಗಿರಲು ನಿದ್ರೆ ಮತ್ತು ಉತ್ತಮ ವಿಶ್ರಾಂತಿ ಬಹಳ ಮುಖ್ಯ. ಇದು ದೇಹ ಮತ್ತು ಮನಸ್ಸಿನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಇದು ದೈಹಿಕ ಮತ್ತು ಮಾನಸಿಕ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಧೀರ್ಘಕಾಲಿನ ಚರ್ಮ ರೋಗಗಳನ್ನು ಗುಣಪಡಿಸಲು ಒಳ್ಳೆಯದು. ಇದು ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ನಿದ್ರೆ ಮತ್ತು ವಿಶ್ರಾಂತಿ ನೆನಪು ಮತ್ತು ಸೃಜನಶೀಲತೆಯನ್ನು ಸುಧಾರಿಸುತ್ತದೆ. ಇದು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ನೋವಿನ ಹಿಡಿತವನ್ನು ಕಡಿಮೆ ಮಾಡುತ್ತದೆ. ನಿದ್ರೆಯಲ್ಲಿ ದೇಹದ ರಿಪೇರಿ ಕಾರ್ಯ ನಡೆಯುತ್ತದೆ. ಅದು ಏಕಾಗ್ರತೆ ಮತ್ತು ಉತ್ಪಾದಕತೆಯನ್ನು ಸುಧಾರಿಸುತ್ತಾರೆ. ಚೆನ್ನಾಗಿ ವಿಶ್ರಾಂತಿ ಪಡೆದ ದೇಹವು ಉತ್ಸಾಹದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ನಿದ್ರೆಯು ಉತ್ತಮ ವಿಶ್ರಾಂತಿಯನ್ನು ನೀಡುವುದಲ್ಲದೆ ಮಾನಸಿಕ ಡೇಟಾ ಮತ್ತು ಸ್ಮರಣೆಯನ್ನು ನಿಭಾಯಿಸುವ ಸಮಯವಾಗಿದೆ. ನಿದ್ರೆಯ ಸಮಯದಲ್ಲಿ ನವ ಯೌವನ ಪಡೆಯುವುದು ವೇಗವಾಗಿರುತ್ತದೆ.

7. ಧೀರ್ಘಕಾಲಿನ ಚರ್ಮ ರೋಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ

ನಿಮ್ಮ ಧೀರ್ಘಕಾಲಿನ ಚರ್ಮ ರೋಗಗಳನ್ನು ನಿಯಂತ್ರಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಿ. ಔಷಧವನ್ನು ಬಿಟ್ಟುಬಿಡಬೇಡಿ. ಆಹಾರದ ಕಡೆ ಗಮನವಿಡಿ. ಮುಲಾಮು, ಆಯಿಂಟ್ಮೆಂಟ್ಗಳನ್ನು ತಪ್ಪಿಸಬೇಡಿ. ನಿಮ್ಮ ಸ್ಥಿತಿಯು ಭಾಗಶಃ ಸುಧಾರಿಸಿದ ನಂತರ ಆಲಸ್ಯವು ನಿಮ್ಮನ್ನು ಆವರಿಸಲು ಬಿಡಬೇಡಿ. ಸಾಬೀತಾದ ಚಿಕಿತ್ಸೆಯ ವಿಧಾನವನ್ನು ಬದಲಾಯಿಸಬೇಡಿ. ಯಾರೋ ಏನೋ ಹೇಳಿದ್ದೆಲ್ಲವನ್ನು ಮಾಡಲು ಹೋಗಬೇಡಿ.

ಧೀರ್ಘಕಾಲಿನ ಚರ್ಮ ರೋಗಗಳನ್ನು ನಿಯಂತ್ರಿಸಿ ಮತ್ತು ಅದು ನಿಯಂತ್ರಣದಲ್ಲೇ ಇರುವಂತೆ ನೋಡಿಕೊಳ್ಳಿ.

ಸಂತೋಷದ ಉತ್ಸಾಹಭರಿತ ಜೀವನವನ್ನು ನಡೆಸಿ.

www.holisticskinspecialist.com
ವೆಬ್ ಸೈಟ್ ನ್ನು ಸಂಧರ್ಶಿಸಿ.

Leave a Reply

Your email address will not be published. Required fields are marked *